ಎಲ್ಲರಿಗು ನಮಸ್ಕಾರ,
ನಾವು (
ಶ್ಯಾಮ್, ಶರತ್, ಯುವ, ಸುಲ್ತಾನ್, ಉತ್ತಮ್ ಮತ್ತು ಪ್ರದೀಪ್) ೨೫
ನೇ ಡಿಸೆಂಬರ್ ಗೆ "Outing" ಹೋಗೋಣ ಎಂದು
ತೀರ್ಮಾನಿಸಿದೆವು. ಕಾರಣಾಂತರಗಳಿಂದ ಅದು ೧ ವಾರ ಮುಂದೆ ಹಾಕಿದೆವು. ಉತ್ತಮ್ ಗೆ ಅದು ರಜೆ
ಯ ಕರಾಣದಿಂದ ಅವನು ಹೊರಗೆ ಉಳಿದನು.
ನಾವು ಡಿಸೆಂಬರ್ ೩೧ಗೆ ಹೊರಡುವ "plan"
ಮಾಡಿದ್ದೆವು. ಆದರೆ ನಾವು ೧ನೆ
ಜನವರಿಗೆ ಹೊರಟೆವು.
ರಾತ್ರಿ ೧೦ ಗಂಟೆ ಗೆ
ನಮ್ಮ ಮನೆಯಲ್ಲಿ: ಸಮಯ ೧೦ ಗಂಟೆ: ಯುವ ನಮ್ಮ ಮನೆಗೆ ಬಂದಿದ್ದ. ನಾವು ಎಲ್ಲರು ಸೇರಿ ಸುಲ್ತಾನ್ ಗೆ "call" ಮಾಡಿದೆವು. "The Vodafone number you are trying to call is not reachable." ಎಂಬ ಮೆಸೇಜ್ ಬಂತು. ಸ್ವಲ್ಪ ಸಮಯದ ನಂತರ ಸುಲ್ತಾನ್ "Chevrolet Tavera" ಗಾಡಿ ಯಲ್ಲಿ ಬಂದ. ಅವನ ಜೊತೆಯಲ್ಲಿ ಇವನ ಸ್ನೇಹಿತರು ಉಮೇಶ್ ಮತ್ತು ಕಾರ್ತಿಕ್ ಬಂದಿದ್ದರು. ನಾವು ಪ್ರದೀಪ್ ನ ಮನೆಗೆ ಹೊರಟೆವು. ಅಲ್ಲಿಂದ
ನೇರವಾಗಿ ಶಿರಸಿ ಗೆ ಹೊರಟೆವು. ಹೋಗುವಾಗ ಒಂದು ಕಾಶಿನಾಥ್ ನ ಸಿನಿಮ ನೋಡಿದೆವು. ಶಿರಸಿ ತಲುಪಿದ ಮೇಲೆ, ಸುಲ್ತಾನ್ ನ ಗೆಳೆಯ ಗುರು ಅವನ ಮನೆಗೆ ಹೋದೆವು. ಅಲ್ಲಿ ಕಾಪಿ ಕುಡಿದೆವು. ಮತ್ತೆ "Break Fast" ಮುಗಿಸಿದೇವು.
ಎಲ್ಲಾರು ಯಾಣ ನೋಡಲು ಹೊರಟೆವು. ಅದು ಎಲ್ಲರ ಮನಸ್ಸೇಳೆದವು. ಬೃಹತ್ ಗಾತ್ರದ ಕಲ್ಲು ಗಳು ಇದ್ದವು. ಅಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಹೊರಟೆವು.
ಒಂದು ನೋಡಿ, ನಾವು (yuva, Shyam and me) ಎಲ್ಲರು ಇನ್ನೊಂದು ಬೆಟ್ಟಕ್ಕೆ ಹೊರಟೆವು. ಅಲ್ಲಿ ನಮಗೆ ಜಾಗ ತಪ್ಪಿ ಹೋಗಿದ್ದವು. ಹೇಗೋ ಸಾಹಸ ಮಾಡಿ ವಾಪಸ್ ಬಂದೆವು. ಅದು ಗೋಕರ್ಣ ಗೋಕರ್ಣ, ನಾವು ಸುಸ್ತು ಆಗಿದೆವ್ವು.
ಮುಂದೆ ವಿಬೂತಿ (falls) ಗೆ ಹೊರಟೆವು. ಅಲ್ಲಿ ಎಲ್ಲರು ನೀರಿನಲ್ಲಿ ಆಡಿದರು. ಮತ್ತೆ ನಾವು ವಾಪಸ್ ಶಿರಸಿ ಗೆ ಬಂದೆವು. ಅಲ್ಲಿ ನಾವು ಮಾರಿಕಾಂಬ ದೇವಸ್ತಾನ ನೋಡಿದೆವು. ಆನಂತರ, ಕಾಪಿ ತಿಂಡಿ ಮುಗಿಸಿದೆವು.
ನಂತರ ಅಲ್ಲಿಂದ ನಾವು ಗೋಕರ್ಣ ಗೆ ಹೊರಟೆವು. ಅಲ್ಲಿ ರೂಂ ಬುಕ್ ಮಾಡಿರಲ್ಲಿಲ್ಲ. ಆದ ಕಾರಣ, ಅಲ್ಲಿ ತಲುಪಿ, ರೂಂ ಗೆ ಹುದಿಕಿದೆವು. ಹಾಗೋ ಹೀಗೋ ರೂಂ ಸಿಕ್ಕಿತು. ನಾನು, ಸುಲ್ತಾನ್, ಕಾರ್ತಿಕ್ ಮತ್ತು ಪ್ರದೀಪ್ ಎಣ್ಣೆ ಹಾಗು ಊಟ ತರಲು ಹೊರಟೆವು. ಎಲ್ಲ್ಲ ತಂದ ಮೇಲೆ, ರೂಂ ನಲ್ಲಿ ಎಣ್ಣೆ ಹಾಕಿದೆವು. ಅದುದರಿಂದ ಊಟ ಯಾರು ಸರಿಯಾಗಿ ಮಾಡಿಲ್ಲ. ನಂತರ, ಕಾರ್ತಿಕ್ ಗೆ ಒಂದ್ "ಪ್ಲಾನ್" ಹೊಳಿತು. ದಿಡೀರ್ ಆಗಿ ಅವನು ಬೀಚ್ ಗೆ ಹೋಗೋಣ ಅಂದ. ನಮಗೆ ಮೊದಲು ಅನಿಸಿತು, ಇಷ್ಟು ಹೊತ್ತಲ್ಲಿ ಏನ್ ನೋಡೋಕ್ಕೆ ಆಗುತ್ತೆ ಅಂತ. ಹಾಗೆ ಫುಲ್ ಜೋಶ್ ನಲ್ಲಿ ಹೊರಟೆವು. ನಮ್ಮ ಉಮೇಶ್ ಅವರು ಫುಲ್ ಟೈಟ್ ಆಗಿ ನಮ್ಮ ಗಾಡಿ ಯಲ್ಲಿ ಮಲಗಿದ್ದರು. ಅವರನ್ನು ಎಬ್ಬಿಸಲು ಎಲ್ಲರು ಸಾಹಸ ಮಾಡಿ ಎಬ್ಬಿಸಿದೆವು. ನಂತರ ಹಾಗೋ ಹೀಗೋ ಗಾಡಿ ಯಲ್ಲಿ ಹೊರಟೆವು. ಅಲ್ಲಿ ತಲುಪಿದೆವು. ತಲುಪಿ ನೋಡಿದಾಗ ಏನೋ ಆನದ. ಮೊದಲನೇ ಸಲ ಮದ್ಯ ರಾತ್ರಿ ಯಲ್ಲಿ ಬೀಚ್ ನೋಡಿದೇವೆ. ವಿಬಿನ್ನ ಅನುಭವ. ಎಲ್ಲರಿಗು ಸಂತೋಷ.
ಅಲ್ಲಿ ಕೆಲವರು ಪರ ದೇಷಿ ಗಳು ಇದ್ದರು. ಅಲ್ಲಿ ನಾವು ಅವರ ಜೊತೆ ಹೋಗಿ ಕುಣಿದೆವು. ಅಲ್ಲಿ ಸಣ್ಣ ಗಲಾಟೆ ಆಯಿತು. ನಂತರ ಅಲ್ಲಿಂದ ಎಲ್ಲರು ಹೊರಟೆವು. ಬಂದು ರೂಂ ನಲ್ಲಿ ಮಲಗಿದೆವು.
ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ತಾನ ಗೆ ಹೊರಟೆವು. ಅಲ್ಲಿ ದೇವರ ದರ್ಶನ ಮುಗಿಸಿ, ಅಲ್ಲಿ ಊಟ ಮಾಡಿದೆವು. ಮತ್ತೆ ಕಾರ್ತಿಕ್ ಬೀಚ್ ನಲ್ಲಿ ಆಡಿದನು. ನಂತರ ನಾವು ಅಲ್ಲಿಂದ ನಾವು ಮುರ್ಡೆಶ್ವರ ಗೆ ಹೊರಟೆವು. ಹೋಗುವ ದಾರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿದೆವು.
ಮುರುಡೇಶ್ವರ:ಆ ಸ್ಥಳ ನೋಡಿ ನಾವು ಬೆರಗಾಗಿ ಹೋದೆವು. ದೊಡ್ಡ ಗೋಪುರ, ಹಾಗು ಶಿವನ ದೊಡ್ಡ ಮೂರ್ತಿ ಕಂಡೆವು. ಅಲ್ಲಿ ದೇವರ ದರ್ಶನ ಮಾಡಿದೆವು. ಒಳಗಡೆ ಹೋಗಿ ರಾವಣ ಶಿವನ ಆತ್ಮಲಿಂಗ ಪ್ರತಿಷ್ಟಾಪನೆ ಮಾಡಿದ ಕಥೆ ಯನ್ನು ಕಲ್ಲಿನ ಕೆತ್ತನೆ ಇಂದ ಮಾಡಿದನ್ನು ನೋಡಿದೆವು. ಎಲ್ಲ ಮುಗಿಸಿ ಅಲ್ಲಿ ಒಂದ್ ಬೀಚ್ ಗೆ ಬಂದೆವು. ಅಲ್ಲಿ ಚೆನಾಗಿ ಆಡಿದೆವು. ನಂತರ ಸ್ನಾನ ಮುಗಿಸಿ, ವಾಪಸ್ ಬೆಂಗಳೂರಿಗೆ ಹೊರಟೆವು.
ಬರುವ ದಾರಿಯಲ್ಲಿ ಸುಮಾರು ೧೦ ಗಂಟೆ ರಾತ್ರಿ ಯಾಗಿತ್ತು. ಅಲ್ಲಿ ಜೋಗ ನೋಡಲು ಕರೆದೊಯ್ದರು. ಅಲ್ಲಿ ನೋಡುವಾಗ, ಒಂದ್ ಫಾಲ್ಸ್ ಇತ್ತು. ಕೆಲವರು ಅದು ಜೋಗ ಎಂದು ಹೇಳಿದರು. ಕೆಲವರು ಅದು ಜೋಗ ಅಲ್ಲ ಎಂದರು. ಕೊನೆಗೆ ಎಲ್ಲರಿಗು ಅದು ಜೋಗ ಎಂದು ಅರಿವು ಆಯಿತು. ಆಗ ಕಾರ್ತಿಕ್, ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋ ತನಕ ಸಂಸಾರದಲ್ಲಿ ಗಂಡ ಗುಂಡಿ, ಏರಿಕೊಂಡು ಹೋಗೋದಿಲ್ಲ ಸತ್ತರ್ ಬಂಡಿ... ಇರೂ ದೊಳಗೆ ನೋಡು ಒಮ್ಮೆ ಜೋಗದ ಗೊಂಡಿ... ಎಂದು ಹಾಡಿದನು.
ಮತ್ತೆ ಎಲ್ಲ ಹೋಗಿ ಊಟ ಮಾಡಿದೆವು. ಬೆಂಗಳೂರಿಗೆ ಹೋಗುವ ದಾರಿಯಲ್ಲಿ ನಮ್ಮ ಗಾಡಿ ಏನೋ ಪ್ರಾಬ್ಲಮ್ ಆಯಿತು. ಎಲ್ಲರು ಗಾಡಿಯಲ್ಲೇ ಮಲಗಿದೆವು. ಬೆಳಗ್ಗೆ ನಮ್ಮ ಇನ್ನೊಬ್ಬ ಸ್ನೇಹಿತ ಇಸ್ರಾನ್ ಗೆ ಕಾಲ್ ಮಾಡಿ ಅವನು ಬಂದನು. ಇಂಜಿನ್ ಆಯಿಲ್ ಎಲ್ಲ ಹಾಕಿ, ಗಾಡಿ ಸರಿ ಮಾಡಿ ಇಸ್ರಾನ್ ನ ಮನೆಗೆ ಹೊರಟೆವು. ಅಲ್ಲಿ ಕಾಪಿ ಕುಡಿದು ಬೆಂಗಳೂರಿಗೆ ಬಂದೆವು.
- ಶರತ್ ಟಿ. ಎಸ್.