ನಾನು ಓದ್ದಿದ್ದು UVCE College. ಮೊದಲನೆ ಸಲ ಅಲ್ಲಿ ಪರಿಚಯ ಆಗಿದ್ದು ಪ್ರಶಾಂತ್ ರ‍್. ಮೊದಲನೆ ದಿನ ಅವನು ಅವನ ತಂದೆ ಜೊತೆ ಬಂದಿದ್ದ.
ಪ್ರಶಾಂತ್ ರ‍್: ಅವನು ತುಂಬಾ ಸಾದು ಮನುಷ್ಯ. ಅವನು ಓದೊದರಲ್ಲಿ ಒಳ್ಳೆಯ Marks ತೆಗೆತಾ ಇದ್ದ. ತುಂಬಾ Silent ಆಗಿ ಇದ್ದ. ಯಾರ ಜೊತೆಗೂ ಹೆಚ್ಚು ಮಾತಾಡೊದು ಇರಲಿಲ್ಲ. ಅವನ ಜೊತೆ ನಾವು Collegeನಲ್ಲಿ ಇರ್ತಿದ್ವಿ.
ಮತ್ತೆ ನಮಗೆ ಪರಿಚಯ ಆಗಿದ್ದು ವಿಜೇಂದ್ರ ಡಿ ಜೆ. ಅವನು ಚಿಕ್ಕಮಗಳೂರಿಂದ ಬಂದಿದ್ದ. ಆದ ಕಾರಣ ಹೊಸ್ಟೆಲ್ ನಲ್ಲಿ ಇರುತ್ತಿದ್ದ. ಒಂದು ವರ್ಷ ಕಳೆದ ಮೇಲೆ ಅವನು ಬೆರೆ Branchಗೆ Transfer ಆಗಿ ಹೊದ. ಹೋದ ಮೇಲೆ ಕೊಡ ಅವನು ನಮ್ಮ ಜೊತೆ ಒಳ್ಳೆ ಸ್ನೇಹಿತನಾಗಿ ಇದ್ದ.
ಯುವರಾಜ್ ಪಿ: ಯುವರಾಜ್ ಅನ್ನುತಿದ್ದ ಹಾಗೆ ನೆನಾಪಾಗೊದು ಅವನ SMILE. ಯಾವುದೇ ಸಂದರ್ಬದಲ್ಲೂ ಕೂಡ ಅವನ ಮುಖದ ಮೆಲೆ Smile ಇರುತ್ತಿತ್ತು. ನಮ್ಮ ಜೊತೆ ತುಂಬಾ close ಆಗಿ ಇದ್ದ. ಕೆಲವರು seniors ಪರಿಚಯ ಇದ್ದುದ್ದರಿಂದ ನಮಗೆ Text books ಕೊಡಿಸುತಿದ್ದ. ನಾವೆಲ್ಲಾರು ಜೊತೆಯಾಗೀಯೆ ಇದ್ದೆವು.
ಸುಲ್ತಾನ್.ಕೆ.ಮ್.: ಸುಲ್ತಾನ್ ತುಂಬಾ Intelligent ಮನುಷ್ಯ. ಯಾವುದೆ ಸಲಹೆ ಕೇಳಿದರೂ ಅವನ ಬಳಿ solution ಇರುತ್ತಿತ್ತು. Computerನ ಬಗ್ಗೆ ಯಾವುದೆ ವಿಚಾರ ಗೊತಿಲ್ಲ ಅಂತ ಇರಲಿಲ್ಲ. ನಮಗೂ ಸಹ ತುಂಬಾ ಸಲ ಸಲಹೆ ಕೊಟ್ಟಿದ್ದ. ಬರೀ computer ಅಲ್ಲ, ಯಾವುದೇ ವಿಚಾರವಾಗಿಯೂ, ಒಳ್ಳೆಯ ಸ್ನೇಹಿತ.
ಉತ್ತಮ್ ರಾವ್ ಜೆ: ಉತ್ತಮ್ ತುಂಬಾ Dicipilne ಮನುಷ್ಯ. ಹೊರಗಡೆ ಜಾಸ್ತಿ ತುನ್ನುತಿರಲಿಲ್ಲ. ಮಾತಿನಲ್ಲೂ ಕೂಡ ತುಂಬಾ dicipline ಕಾಣಬಹುದಾಗಿತ್ತು. ಅವನಿಗೆ ಅನಿಸಿದ್ದನ್ನ ಅನ್ನಿಸಿದ ಹಾಗೆ ಹೆಳಿಬಿಡುತ್ತಿದ್ದನು.
ಇನ್ನು ಮುಂತಾದ ಗೆಳೆಯರು ಇದ್ದರು. ಆದರೆ ನಾವು ಪ್ರಶಾಂತ್, ಯುವರಾಜ್, ಸುಲ್ತಾನ್ ಹಾಗು ಉತ್ತಮ್ ಜೊತೆ ಹೆಚ್ಚು ಕಾಲ ಕಳಿಯುತ್ತಿದ್ದೆವು.
Collegeನ ಒಂದು ಮುನ್ನೊಟ...
ನಮಗೆ Ragging ಬಗ್ಗೆ ತುಂಬಾ ಭಯವಿತ್ತು. ಯಾರು ಏನು ಮಾಡಲು ಹೇಳಿಬಿಡುತ್ತಾರೋ ಅಂತ. ಆದರೆ ನಮ್ಮ Collegeನಲ್ಲಿ Ragging ಇರಲಿಲ್ಲ. Hostelನಲ್ಲಿ ಕೆಲವು ಘಟನೆಗಳು ನಡೆದಿರಬಹುದು, ಆದರೆ ಅದರ ಪೂರ್ತಿ ಮಾಹಿತಿ ನಮಗೆ ತಿಳಿದಿರಲಿಲ್ಲ.
ನೋಡಲು ಹಳೆಯ Building. ನೋಡಲು ಮಾತ್ರ ಅಲ್ಲ, ಅದು ನಿಜವಾಗಿಯು ಹಳೆಯ Building.
Civil Department ಬೇರೆ ಕಡೆ ಇತ್ತು, Mechanical block ಬೆರೆ building.
Main blockನಲ್ಲಿ Comp Science, Electrical, Information science ಇತ್ತು. Library ಹಾಗು Cyber Center ಕೂಡ ಇತ್ತು.
College Canteen...
Canteen ಅಂದ ಹಾಗೆ Filmಗಳಲ್ಲಿ ತೋರಿಸುವ ಹಾಗೆ ಅಂತ ಭಾವಿಸಬೇಡಿ. ಅದು ಸುಮಾರು ೨೦ ಕುರ್ಚಿಗಳು ಇರಬಹುದು, ಮತ್ತೆ ಒಂದು Kitchen. ಹೆಚ್ಚಾಗಿ ಚಾಹ(Tea) ಇರುತ್ತಿತ್ತು. Cigerate ಸೇದುವವರಿಗೆ Favorite Spot.
College Cyber Center...
ನಾವು ಮೊದಲನೆ ಬಾರಿ Cyberಗೆ ಹೊಗಿದ್ದು ಅಲ್ಲೆ. ಒಂದ್ ೨೦ Computer ಹಾಗು ಅಂತರ್ಜಾಲ (Internet) ಇತ್ತು.
Mech students ಹೋದರೆ ಖಾಲಿ ಇಲ್ಲ ಅನ್ನುತಿದ್ದರು. ಹೇಗೊ ಬಿಡುವು ಇರುವ ವೇಳೆಯಲ್ಲಿ ಹೋಗಿ ಉಪಯೋಗಿಸುತ್ತಿದ್ದೆವು.
Internet Connection ಎಷ್ಟು Fast ಅಂದ್ರೆ ಅದನ್ನು ಹೊಗಳಿದವರೇ ಇಲ್ಲ. ಒಂದು Page Open ಮಾಡಿ ಹತ್ತು ನಿಮಿಷ ಆದ ನಂತರ Open ಆಗುತಿತ್ತು.
Mechanical Department
ಮೊದಲು ನಾವು ಅಲ್ಲಿಗೆ ಹೊದಿದ್ದು Machine Shop and Carpentary Labಗೆ. Carpentaryನಲ್ಲಿ ಕೊಡುವ ಮರದ ತುಂಡು ಯಾವುದೋ ಹಳೆಯ ತುಂಡು ಇರುವ ಹಾಗೆ ಇತ್ತು. ಹೇಗೊ ಅದರಲ್ಲೆ ಎಲ್ಲಾ ವಿದ್ಯಾರ್ಥಿಗಳು ಮಾಡುತಿದ್ದರು. ಒಂದು ವೇಳೆ ಹೊಡೆದು ಹೊದರೆ, Something ಕೊಟ್ಟ್ರೆ ಇನ್ನೊಂದು ಕೊಡುತಿದ್ದರು. Machine Shop ನಲ್ಲೂ ಅದೇ ಗತಿ.
ಆದರೆ ಎಲ್ಲಿ ಇರುವ Machine's ತುಂಬಾ ಒಳ್ಳೆಯ Conditionನಲ್ಲಿ ಇರುತಿತ್ತು. ಎಲ್ಲಾ ಚೆನಾಗಿ ಕೆಲಸ ಮಾಡುತಿತ್ತು.