Wednesday, February 24, 2010

3 idiots

नमस्कार,

हम युवा, रूपा, श्याम, और में, सब मिलकर 3 idiots movie के लिए गए। हम अभिनय चित्र मंदिर को गए। सब लोगो ने खूब मस्ती किये। वो देकने के बाद शती सागर में खा कर आगये।


शरत

ರಾಮ್ ಚಿತ್ರ ಹಾಗು ಸುಲ್ತಾನ್ ನ ಜನುಮ ದಿನ


ನಾವು ರಾಮ್ ಚಿತ್ರವನ್ನು ಡಿಸೆಂಬರ್ ೨೬, ೨೦೦೯ ರಂದು ನೋಡಿದೆವು. ನಾನು, ಶ್ಯಾಮ್, ಯುವ & ರೂಪ. ನಾವು ಹೋಗಿ ಟಿಕೆಟ್ ಗೆ ಲೈನ್ ನಲ್ಲಿ ನಿಲ್ಲುವ ಮೊದಲೇ "ಚಿತಮಂದಿರ ತುಂಬಿದೆ" ಎಂದು ಬೋರ್ಡ್ ಹಾಕಿದರು. ನಮಗೆ ಅ ಚಿತ್ರ ನೋಡುವ ಕಾತುರ ಇತ್ತು. ಆದ ಕರಣ, ನಾವು ಬ್ಲಾಕ್ ನಲ್ಲಿ ಟಿಕೆಟ್ ತೆಗೆದು ನೋಡಿದೆವು.
ಚಿತ್ರ ತಂಬಾ ಚೆನಾಗಿ ಇದೆ. ಇಂಟರ್ವಲ್ ನ ನಂತರ ಬಲು ಹಾಸ್ಯ ಕರವಾಗಿದೆ. ಪುನೀತ್, ರಂಗಾಯಣ ರಘು ಚಿತ್ರವನ್ನು ಹಿಡಿದಿದ್ದಾರೆ. ಎಲ್ಲರು ಚೆನಾಗಿ ಮಜಾ ಮಾಡಿ ಬಂದೆವು.

ಜನುವರಿ ೧೦ನೆ, ೨೦೧೦ ತಾರೀಕು. ಸುಲ್ತಾನ್ ನ ಜನುಮ ದಿನ. ನಾವು ಎಲ್ಲರು ಸೇರಿ ಪಾರ್ಟಿ ಮಾಡುವ ಪ್ಲಾನ್ ಮಾಡಿದೆವು. ಕಾರಣಾಂತರದಿಂದ ಸುಲ್ತಾನ್ ಮತ್ತು ಯುವ ಲೇಟ್ ಆಗುತ್ತೆ ಅಂತ ಹೇಳಿದರು. ನಾವು ಅಂದರೆ, ಶ್ಯಾಮ್ ಮತ್ತು ನಾನು ಇನ್ನೊಮ್ಮೆ ರಾಮ್ ಚಿತ್ರ ನೋಡಿದೆವು. ಅದು ಆದ ಮೇಲೆ, ಸುಲ್ತಾನ್ ಮತ್ತು ಯುವ ಬಂದರು. ನಾವು ಹೋಗಿ, ಸ್ನಕ್ಕ್ಸ್, ಚಿಕನ್ ಮತ್ತು ವಿವಿದ ಪದಾರ್ತ ತಿಂದು ಬಂದೆವು.

Wednesday, February 10, 2010

ಹೊಸ ವರ್ಷ ಸ್ನೇಹಿತರ ಜೊತೆಯಲ್ಲಿ

ಎಲ್ಲರಿಗು ನಮಸ್ಕಾರ,

ನಾವು (ಶ್ಯಾಮ್, ಶರತ್, ಯುವ, ಸುಲ್ತಾನ್, ಉತ್ತಮ್ ಮತ್ತು ಪ್ರದೀಪ್) ೨೫ನೇ ಡಿಸೆಂಬರ್ ಗೆ "Outing" ಹೋಗೋಣ ಎಂದು ತೀರ್ಮಾನಿಸಿದೆವು. ಕಾರಣಾಂತರಗಳಿಂದ ಅದು ೧ ವಾರ ಮುಂದೆ ಹಾಕಿದೆವು. ಉತ್ತಮ್ ಗೆ ಅದು ರಜೆಕರಾಣದಿಂದ ಅವನು ಹೊರಗೆ ಉಳಿದನು.


ನಾವು ಡಿಸೆಂಬರ್ ೩೧ಗೆ ಹೊರಡುವ "plan" ಮಾಡಿದ್ದೆವು. ಆದರೆ ನಾವು ೧ನೆ ಜನವರಿಗೆ ಹೊರಟೆವು.



ರಾತ್ರಿ ೧೦ ಗಂಟೆ ಗೆ ನಮ್ಮ ಮನೆಯಲ್ಲಿ: ಸಮಯ ೧೦ ಗಂಟೆ: ಯುವ ನಮ್ಮ ಮನೆಗೆ ಬಂದಿದ್ದ. ನಾವು ಎಲ್ಲರು ಸೇರಿ ಸುಲ್ತಾನ್ ಗೆ "call" ಮಾಡಿದೆವು. "The Vodafone number you are trying to call is not reachable." ಎಂಬ ಮೆಸೇಜ್ ಬಂತು. ಸ್ವಲ್ಪ ಸಮಯದ ನಂತರ ಸುಲ್ತಾನ್ "Chevrolet Tavera" ಗಾಡಿ ಯಲ್ಲಿ ಬಂದ. ಅವನ ಜೊತೆಯಲ್ಲಿ ಇವನ ಸ್ನೇಹಿತರು ಉಮೇಶ್ ಮತ್ತು ಕಾರ್ತಿಕ್ ಬಂದಿದ್ದರು. ನಾವು ಪ್ರದೀಪ್ ನ ಮನೆಗೆ ಹೊರಟೆವು. ಅಲ್ಲಿಂದ ನೇರವಾಗಿ ಶಿರಸಿ ಗೆ ಹೊರಟೆವು. ಹೋಗುವಾಗ ಒಂದು ಕಾಶಿನಾಥ್ ನ ಸಿನಿಮ ನೋಡಿದೆವು. ಶಿರಸಿ ತಲುಪಿದ ಮೇಲೆ, ಸುಲ್ತಾನ್ ನ ಗೆಳೆಯ ಗುರು ಅವನ ಮನೆಗೆ ಹೋದೆವು. ಅಲ್ಲಿ ಕಾಪಿ ಕುಡಿದೆವು. ಮತ್ತೆ "Break Fast" ಮುಗಿಸಿದೇವು.

ಎಲ್ಲಾರು ಯಾಣ ನೋಡಲು ಹೊರಟೆವು. ಅದು ಎಲ್ಲರ ಮನಸ್ಸೇಳೆದವು. ಬೃಹತ್ ಗಾತ್ರದ ಕಲ್ಲು ಗಳು ಇದ್ದವು.
ಅಲ್ಲಿ ಇದ್ದ ಒಂದು ದೇವಸ್ಥಾನಕ್ಕೆ ಹೊರಟೆವು.

ಒಂದು ನೋಡಿ, ನಾವು (yuva, Shyam and me) ಎಲ್ಲರು ಇನ್ನೊಂದು ಬೆಟ್ಟಕ್ಕೆ ಹೊರಟೆವು. ಅಲ್ಲಿ ನಮಗೆ ಜಾಗ ತಪ್ಪಿ ಹೋಗಿದ್ದವು. ಹೇಗೋ ಸಾಹಸ ಮಾಡಿ ವಾಪಸ್ ಬಂದೆವು. ಅದು ಗೋಕರ್ಣ ಗೋಕರ್ಣ, ನಾವು ಸುಸ್ತು ಆಗಿದೆವ್ವು.


ಮುಂದೆ ವಿಬೂತಿ (falls) ಗೆ ಹೊರಟೆವು. ಅಲ್ಲಿ ಎಲ್ಲರು ನೀರಿನಲ್ಲಿ ಆಡಿದರು. ಮತ್ತೆ ನಾವು ವಾಪಸ್ ಶಿರಸಿ ಗೆ ಬಂದೆವು. ಅಲ್ಲಿ ನಾವು ಮಾರಿಕಾಂಬ ದೇವಸ್ತಾನ ನೋಡಿದೆವು. ಆನಂತರ, ಕಾಪಿ ತಿಂಡಿ ಮುಗಿಸಿದೆವು.

ನಂತರ ಅಲ್ಲಿಂದ ನಾವು ಗೋಕರ್ಣ ಗೆ ಹೊರಟೆವು. ಅಲ್ಲಿ ರೂಂ ಬುಕ್ ಮಾಡಿರಲ್ಲಿಲ್ಲ. ಆದ ಕಾರಣ, ಅಲ್ಲಿ ತಲುಪಿ, ರೂಂ ಗೆ ಹುದಿಕಿದೆವು. ಹಾಗೋ ಹೀಗೋ ರೂಂ ಸಿಕ್ಕಿತು. ನಾನು, ಸುಲ್ತಾನ್, ಕಾರ್ತಿಕ್ ಮತ್ತು ಪ್ರದೀಪ್ ಎಣ್ಣೆ ಹಾಗು ಊಟ ತರಲು ಹೊರಟೆವು. ಎಲ್ಲ್ಲ ತಂದ ಮೇಲೆ, ರೂಂ ನಲ್ಲಿ ಎಣ್ಣೆ ಹಾಕಿದೆವು. ಅದುದರಿಂದ ಊಟ ಯಾರು ಸರಿಯಾಗಿ ಮಾಡಿಲ್ಲ. ನಂತರ, ಕಾರ್ತಿಕ್ ಗೆ ಒಂದ್ "ಪ್ಲಾನ್" ಹೊಳಿತು. ದಿಡೀರ್ ಆಗಿ ಅವನು ಬೀಚ್ ಗೆ ಹೋಗೋಣ ಅಂದ. ನಮಗೆ ಮೊದಲು ಅನಿಸಿತು, ಇಷ್ಟು ಹೊತ್ತಲ್ಲಿ ಏನ್ ನೋಡೋಕ್ಕೆ ಆಗುತ್ತೆ ಅಂತ. ಹಾಗೆ ಫುಲ್ ಜೋಶ್ ನಲ್ಲಿ ಹೊರಟೆವು. ನಮ್ಮ ಉಮೇಶ್ ಅವರು ಫುಲ್ ಟೈಟ್ ಆಗಿ ನಮ್ಮ ಗಾಡಿ ಯಲ್ಲಿ ಮಲಗಿದ್ದರು. ಅವರನ್ನು ಎಬ್ಬಿಸಲು ಎಲ್ಲರು ಸಾಹಸ ಮಾಡಿ ಎಬ್ಬಿಸಿದೆವು. ನಂತರ ಹಾಗೋ ಹೀಗೋ ಗಾಡಿ ಯಲ್ಲಿ ಹೊರಟೆವು. ಅಲ್ಲಿ ತಲುಪಿದೆವು. ತಲುಪಿ ನೋಡಿದಾಗ ಏನೋ ಆನದ. ಮೊದಲನೇ ಸಲ ಮದ್ಯ ರಾತ್ರಿ ಯಲ್ಲಿ ಬೀಚ್ ನೋಡಿದೇವೆ. ವಿಬಿನ್ನ ಅನುಭವ. ಎಲ್ಲರಿಗು ಸಂತೋಷ.
ಅಲ್ಲಿ ಕೆಲವರು ಪರ ದೇಷಿ ಗಳು ಇದ್ದರು. ಅಲ್ಲಿ ನಾವು ಅವರ ಜೊತೆ ಹೋಗಿ ಕುಣಿದೆವು. ಅಲ್ಲಿ ಸಣ್ಣ ಗಲಾಟೆ ಆಯಿತು. ನಂತರ ಅಲ್ಲಿಂದ ಎಲ್ಲರು ಹೊರಟೆವು. ಬಂದು ರೂಂ ನಲ್ಲಿ ಮಲಗಿದೆವು.

ಬೆಳಗ್ಗೆ ಎದ್ದು ಸ್ನಾನ ಮಾಡಿ ದೇವಸ್ತಾನ ಗೆ ಹೊರಟೆವು. ಅಲ್ಲಿ ದೇವರ ದರ್ಶನ ಮುಗಿಸಿ, ಅಲ್ಲಿ ಊಟ ಮಾಡಿದೆವು. ಮತ್ತೆ ಕಾರ್ತಿಕ್ ಬೀಚ್ ನಲ್ಲಿ ಆಡಿದನು. ನಂತರ ನಾವು ಅಲ್ಲಿಂದ ನಾವು ಮುರ್ಡೆಶ್ವರ ಗೆ ಹೊರಟೆವು. ಹೋಗುವ ದಾರಿಯಲ್ಲಿ ಚೆನ್ನಾಗಿ ನಿದ್ದೆ ಮಾಡಿದೆವು.

ಮುರುಡೇಶ್ವರ:ಆ ಸ್ಥಳ ನೋಡಿ ನಾವು ಬೆರಗಾಗಿ ಹೋದೆವು. ದೊಡ್ಡ ಗೋಪುರ, ಹಾಗು ಶಿವನ ದೊಡ್ಡ ಮೂರ್ತಿ ಕಂಡೆವು. ಅಲ್ಲಿ ದೇವರ ದರ್ಶನ ಮಾಡಿದೆವು. ಒಳಗಡೆ ಹೋಗಿ ರಾವಣ ಶಿವನ ಆತ್ಮಲಿಂಗ ಪ್ರತಿಷ್ಟಾಪನೆ ಮಾಡಿದ ಕಥೆ ಯನ್ನು ಕಲ್ಲಿನ ಕೆತ್ತನೆ ಇಂದ ಮಾಡಿದನ್ನು ನೋಡಿದೆವು. ಎಲ್ಲ ಮುಗಿಸಿ ಅಲ್ಲಿ ಒಂದ್ ಬೀಚ್ ಗೆ ಬಂದೆವು. ಅಲ್ಲಿ ಚೆನಾಗಿ ಆಡಿದೆವು. ನಂತರ ಸ್ನಾನ ಮುಗಿಸಿ, ವಾಪಸ್ ಬೆಂಗಳೂರಿಗೆ ಹೊರಟೆವು.
ಬರುವ ದಾರಿಯಲ್ಲಿ ಸುಮಾರು ೧೦ ಗಂಟೆ ರಾತ್ರಿ ಯಾಗಿತ್ತು. ಅಲ್ಲಿ ಜೋಗ ನೋಡಲು ಕರೆದೊಯ್ದರು. ಅಲ್ಲಿ ನೋಡುವಾಗ, ಒಂದ್ ಫಾಲ್ಸ್ ಇತ್ತು. ಕೆಲವರು ಅದು ಜೋಗ ಎಂದು ಹೇಳಿದರು. ಕೆಲವರು ಅದು ಜೋಗ ಅಲ್ಲ ಎಂದರು. ಕೊನೆಗೆ ಎಲ್ಲರಿಗು ಅದು ಜೋಗ ಎಂದು ಅರಿವು ಆಯಿತು. ಆಗ ಕಾರ್ತಿಕ್, ಮಾನವನಾಗಿ ಹುಟ್ಟಿದ ಮೇಲೆ ಏನೇನ್ ಕಂಡಿ, ಸಾಯೋ ತನಕ ಸಂಸಾರದಲ್ಲಿ ಗಂಡ ಗುಂಡಿ, ಏರಿಕೊಂಡು ಹೋಗೋದಿಲ್ಲ ಸತ್ತರ್ ಬಂಡಿ... ಇರೂ ದೊಳಗೆ ನೋಡು ಒಮ್ಮೆ ಜೋಗದ ಗೊಂಡಿ... ಎಂದು ಹಾಡಿದನು.
ಮತ್ತೆ ಎಲ್ಲ ಹೋಗಿ ಊಟ ಮಾಡಿದೆವು. ಬೆಂಗಳೂರಿಗೆ ಹೋಗುವ ದಾರಿಯಲ್ಲಿ ನಮ್ಮ ಗಾಡಿ ಏನೋ ಪ್ರಾಬ್ಲಮ್ ಆಯಿತು. ಎಲ್ಲರು ಗಾಡಿಯಲ್ಲೇ ಮಲಗಿದೆವು. ಬೆಳಗ್ಗೆ ನಮ್ಮ ಇನ್ನೊಬ್ಬ ಸ್ನೇಹಿತ ಇಸ್ರಾನ್ ಗೆ ಕಾಲ್ ಮಾಡಿ ಅವನು ಬಂದನು. ಇಂಜಿನ್ ಆಯಿಲ್ ಎಲ್ಲ ಹಾಕಿ, ಗಾಡಿ ಸರಿ ಮಾಡಿ ಇಸ್ರಾನ್ ನ ಮನೆಗೆ ಹೊರಟೆವು. ಅಲ್ಲಿ ಕಾಪಿ ಕುಡಿದು ಬೆಂಗಳೂರಿಗೆ ಬಂದೆವು.

- ಶರತ್ ಟಿ. ಎಸ್.

Sunday, July 12, 2009

ನಾವು ಹೊದ ಮೊದಲನೆಯ ಪ್ರವಾಸ

ಸ್ಥಳ: ಧರ್ಮಸ್ಥಳ, ಶ್ರಿಂಗೇರಿ, ಹೊರನಾಡು.

ನಾವು ಆರು ಸ್ನೇಹಿತರು ಹೊರಟೆವು. ಶ್ಯಾಂ, ಯುವರಾಜ್, ಉತ್ತಮ್, ಪ್ರಶಾಂತ್, ಪ್ರದೀಪ್ ಮತ್ತು ನಾನು.

ಈ ಆರು ಜನರ ಪೈಕಿ ಪ್ರದೀಪ್ ಹೆಚ್ಚು Travel ಮಾಡುತಿದ್ದ. ಆದರಿಂದ ನಾವು Bus booking ಅನ್ನು ಅವನಿಗೆ ವಹಿಸಿದ್ದೆವು. ಅವನು ಯಾವುದೇ ತೊಂದರೆ ಇಲ್ಲದೆ ಕರ್ನಾಟಕ ಸಾರಿಗೆ Busನಲ್ಲಿ ಬೂಕ್ ಮಾಡಿದ್ದ. ನಾವು ಎಲ್ಲಾರು ಜೊತೆಯಾಗಿ ಹೊದೆವು.

ಇನ್ನು ಹೆಚ್ಚು ಬರಲಿದೆ. ನಿರೀಕ್ಷಿಸಿ....

Wednesday, July 8, 2009

ನನ್ನ College

ನಾನು ಓದ್ದಿದ್ದು UVCE College. ಮೊದಲನೆ ಸಲ ಅಲ್ಲಿ ಪರಿಚಯ ಆಗಿದ್ದು ಪ್ರಶಾಂತ್ ರ‍್. ಮೊದಲನೆ ದಿನ ಅವನು ಅವನ ತಂದೆ ಜೊತೆ ಬಂದಿದ್ದ.
ಪ್ರಶಾಂತ್ ರ‍್: ಅವನು ತುಂಬಾ ಸಾದು ಮನುಷ್ಯ. ಅವನು ಓದೊದರಲ್ಲಿ ಒಳ್ಳೆಯ Marks ತೆಗೆತಾ ಇದ್ದ. ತುಂಬಾ Silent ಆಗಿ ಇದ್ದ. ಯಾರ ಜೊತೆಗೂ ಹೆಚ್ಚು ಮಾತಾಡೊದು ಇರಲಿಲ್ಲ. ಅವನ ಜೊತೆ ನಾವು Collegeನಲ್ಲಿ ಇರ್ತಿದ್ವಿ.

ಮತ್ತೆ ನಮಗೆ ಪರಿಚಯ ಆಗಿದ್ದು ವಿಜೇಂದ್ರ ಡಿ ಜೆ. ಅವನು ಚಿಕ್ಕಮಗಳೂರಿಂದ ಬಂದಿದ್ದ. ಆದ ಕಾರಣ ಹೊಸ್ಟೆಲ್ ನಲ್ಲಿ ಇರುತ್ತಿದ್ದ. ಒಂದು ವರ್ಷ ಕಳೆದ ಮೇಲೆ ಅವನು ಬೆರೆ Branchಗೆ Transfer ಆಗಿ ಹೊದ. ಹೋದ ಮೇಲೆ ಕೊಡ ಅವನು ನಮ್ಮ ಜೊತೆ ಒಳ್ಳೆ ಸ್ನೇಹಿತನಾಗಿ ಇದ್ದ.

ಯುವರಾಜ್ ಪಿ: ಯುವರಾಜ್ ಅನ್ನುತಿದ್ದ ಹಾಗೆ ನೆನಾಪಾಗೊದು ಅವನ SMILE. ಯಾವುದೇ ಸಂದರ್ಬದಲ್ಲೂ ಕೂಡ ಅವನ ಮುಖದ ಮೆಲೆ Smile ಇರುತ್ತಿತ್ತು. ನಮ್ಮ ಜೊತೆ ತುಂಬಾ close ಆಗಿ ಇದ್ದ. ಕೆಲವರು seniors ಪರಿಚಯ ಇದ್ದುದ್ದರಿಂದ ನಮಗೆ Text books ಕೊಡಿಸುತಿದ್ದ. ನಾವೆಲ್ಲಾರು ಜೊತೆಯಾಗೀಯೆ ಇದ್ದೆವು.

ಸುಲ್ತಾನ್.ಕೆ.ಮ್.: ಸುಲ್ತಾನ್ ತುಂಬಾ Intelligent ಮನುಷ್ಯ. ಯಾವುದೆ ಸಲಹೆ ಕೇಳಿದರೂ ಅವನ ಬಳಿ solution ಇರುತ್ತಿತ್ತು. Computerನ ಬಗ್ಗೆ ಯಾವುದೆ ವಿಚಾರ ಗೊತಿಲ್ಲ ಅಂತ ಇರಲಿಲ್ಲ. ನಮಗೂ ಸಹ ತುಂಬಾ ಸಲ ಸಲಹೆ ಕೊಟ್ಟಿದ್ದ. ಬರೀ computer ಅಲ್ಲ, ಯಾವುದೇ ವಿಚಾರವಾಗಿಯೂ, ಒಳ್ಳೆಯ ಸ್ನೇಹಿತ.

ಉತ್ತಮ್ ರಾವ್ ಜೆ: ಉತ್ತಮ್ ತುಂಬಾ Dicipilne ಮನುಷ್ಯ. ಹೊರಗಡೆ ಜಾಸ್ತಿ ತುನ್ನುತಿರಲಿಲ್ಲ. ಮಾತಿನಲ್ಲೂ ಕೂಡ ತುಂಬಾ dicipline ಕಾಣಬಹುದಾಗಿತ್ತು. ಅವನಿಗೆ ಅನಿಸಿದ್ದನ್ನ ಅನ್ನಿಸಿದ ಹಾಗೆ ಹೆಳಿಬಿಡುತ್ತಿದ್ದನು.

ಇನ್ನು ಮುಂತಾದ ಗೆಳೆಯರು ಇದ್ದರು. ಆದರೆ ನಾವು ಪ್ರಶಾಂತ್, ಯುವರಾಜ್, ಸುಲ್ತಾನ್ ಹಾಗು ಉತ್ತಮ್ ಜೊತೆ ಹೆಚ್ಚು ಕಾಲ ಕಳಿಯುತ್ತಿದ್ದೆವು.

Collegeನ ಒಂದು ಮುನ್ನೊಟ...
ನಮಗೆ Ragging ಬಗ್ಗೆ ತುಂಬಾ ಭಯವಿತ್ತು. ಯಾರು ಏನು ಮಾಡಲು ಹೇಳಿಬಿಡುತ್ತಾರೋ ಅಂತ. ಆದರೆ ನಮ್ಮ Collegeನಲ್ಲಿ Ragging ಇರಲಿಲ್ಲ. Hostelನಲ್ಲಿ ಕೆಲವು ಘಟನೆಗಳು ನಡೆದಿರಬಹುದು, ಆದರೆ ಅದರ ಪೂರ್ತಿ ಮಾಹಿತಿ ನಮಗೆ ತಿಳಿದಿರಲಿಲ್ಲ.
ನೋಡಲು ಹಳೆಯ Building. ನೋಡಲು ಮಾತ್ರ ಅಲ್ಲ, ಅದು ನಿಜವಾಗಿಯು ಹಳೆಯ Building.
Civil Department ಬೇರೆ ಕಡೆ ಇತ್ತು, Mechanical block ಬೆರೆ building.
Main blockನಲ್ಲಿ Comp Science, Electrical, Information science ಇತ್ತು. Library ಹಾಗು Cyber Center ಕೂಡ ಇತ್ತು.

College Canteen...
Canteen ಅಂದ ಹಾಗೆ Filmಗಳಲ್ಲಿ ತೋರಿಸುವ ಹಾಗೆ ಅಂತ ಭಾವಿಸಬೇಡಿ. ಅದು ಸುಮಾರು ೨೦ ಕುರ್ಚಿಗಳು ಇರಬಹುದು, ಮತ್ತೆ ಒಂದು Kitchen. ಹೆಚ್ಚಾಗಿ ಚಾಹ(Tea) ಇರುತ್ತಿತ್ತು. Cigerate ಸೇದುವವರಿಗೆ Favorite Spot.

College Cyber Center...
ನಾವು ಮೊದಲನೆ ಬಾರಿ Cyberಗೆ ಹೊಗಿದ್ದು ಅಲ್ಲೆ. ಒಂದ್ ೨೦ Computer ಹಾಗು ಅಂತರ್ಜಾಲ (Internet) ಇತ್ತು.
Mech students ಹೋದರೆ ಖಾಲಿ ಇಲ್ಲ ಅನ್ನುತಿದ್ದರು. ಹೇಗೊ ಬಿಡುವು ಇರುವ ವೇಳೆಯಲ್ಲಿ ಹೋಗಿ ಉಪಯೋಗಿಸುತ್ತಿದ್ದೆವು.
Internet Connection ಎಷ್ಟು Fast ಅಂದ್ರೆ ಅದನ್ನು ಹೊಗಳಿದವರೇ ಇಲ್ಲ. ಒಂದು Page Open ಮಾಡಿ ಹತ್ತು ನಿಮಿಷ ಆದ ನಂತರ Open ಆಗುತಿತ್ತು.

Mechanical Department
ಮೊದಲು ನಾವು ಅಲ್ಲಿಗೆ ಹೊದಿದ್ದು Machine Shop and Carpentary Labಗೆ. Carpentaryನಲ್ಲಿ ಕೊಡುವ ಮರದ ತುಂಡು ಯಾವುದೋ ಹಳೆಯ ತುಂಡು ಇರುವ ಹಾಗೆ ಇತ್ತು. ಹೇಗೊ ಅದರಲ್ಲೆ ಎಲ್ಲಾ ವಿದ್ಯಾರ್ಥಿಗಳು ಮಾಡುತಿದ್ದರು. ಒಂದು ವೇಳೆ ಹೊಡೆದು ಹೊದರೆ, Something ಕೊಟ್ಟ್ರೆ ಇನ್ನೊಂದು ಕೊಡುತಿದ್ದರು. Machine Shop ನಲ್ಲೂ ಅದೇ ಗತಿ.
ಆದರೆ ಎಲ್ಲಿ ಇರುವ Machine's ತುಂಬಾ ಒಳ್ಳೆಯ Conditionನಲ್ಲಿ ಇರುತಿತ್ತು. ಎಲ್ಲಾ ಚೆನಾಗಿ ಕೆಲಸ ಮಾಡುತಿತ್ತು.






Monday, July 6, 2009

ನನ್ನ ಪರಿಚಯ

ನಾನ್ನ ಹೆಸರು ಶರತ್ .ಟಿ .ಎಸ್.
ನಾನು ಹುಟ್ಟಿದ್ದು, ಬೆಳೆದಿದ್ದು ಎಲ್ಲಾ ಬೆಂಗಳೂರಿನಲ್ಲಿ.
ನಾನು ಸಮಾನ್ಯವಾಗಿ ಎಲ್ಲಾ ಜನರ ಜೊತೆ ಹೆಚ್ಚು ಮಾತಾಡೊದು ಇಲ್ಲ.
ನಾನು Schoolಗೆ ಹೊಗುತಿದಾಗ ಕೆಲವರು ಗೆಳೆಯರು ಇದ್ದರು. ಆದರೆ, ಆ ಸಮಯದಲ್ಲಿ ಬರೀ ಓದೊದರ ಕಡೆ ಹೆಚ್ಚು ಗಮನ ಇತ್ತು. ಆದರಿಂದ, School life ಮುಗಿದ ಬಳಿಕ ಹೆಚ್ಚು Contacts ಇರಲಿಲ್ಲ.
PU Collegeನಲ್ಲಿ ಕೂಡ ಅಷ್ಟು ಹೆಚ್ಚು Contacts ಇರಲ್ಲಿಲ್ಲ. ಕಾರಣ, ನಾನು ನನ್ನ ಅಣ್ಣನ ಜೊತೆ ಗೆ ಹೊಗೊದು, ಬರೋದು ಮಾಡುತಿದ್ದೆ.